SANDHYA’S CO-SCHOLASTIC ACTIVITIES

  • SPECIAL WEEKS

                             ಶಾಲೆಯಲ್ಲಿ ನಡೆಯುವ ಚಟುವಟಿಕೆಗಳು ಬರೀ ಪಠ್ಯಕ್ಕೆ ಸೀಮಿತವಾಗಿರಬಾರದು.ಪಠ್ಯೇತರ ಚಟುವಟಿಕೆಗಳನ್ನು ಶಾಲೆಯಲ್ಲಿ ಆಯೋಜಿಸಿದಾಗ ಮಕ್ಕಳ ಬುದ್ಧಿಶಕ್ತಿ ಸಾಮರ್ಥ್ಯ ಹೆಚ್ಚಾಗುವುದರ ಜೊತೆಗೆ ಮಕ್ಕಳು ಇನ್ನಷ್ಟು ಕ್ರಿಯಾಶೀಲರಾಗುವರು. ಹಾಗೆಯೇ ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ’ ಸ್ಪೇಷಲ್ ವೀಕ್’ ಎಂಬ ಪರಿಕಲ್ಪನೆಯನ್ನು ನಡೆಸುತ್ತಾರೆ. ಇದರಲ್ಲಿ ಸೃಜನಾತ್ಮಕತೆಯುಳ್ಳ ಹೊಸ ಹೊಸ ಆಲೋಚನೆಗಳೊಂದಿಗೆ ’ಸ್ಪೇಷಲ್ ವೀಕ್’ ನಡೆಸಲಾಗುತ್ತದೆ. ಇಂತಹ ಚಟುವಟಿಕೆಗಳು ಮಕ್ಕಳ ಏಳಿಗೆಗೆ ಪೂರಕವಾಗಿರುತ್ತವೆ.

೧) ಲೈಬ್ರರಿ ವೀಕ್=  ಈ ವರ್ಷ ನಡೆಸಿದ ಗ್ರಂಥಾಲಯದ ವಿಶೇಷ ದಿನಗಳಲ್ಲಿ ವಾರದ ಒಂದೊಂದು ದಿನ ಹೊಸ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಇಡೀ ವಾರ ಪ್ರಸಿದ್ಧ ಲೇಖಕರ ಗ್ರಂಥಗಳನ್ನು ಓದುವುದು, ಆಯ್ಕೆ ಮಾಡಿಕೊಂಡ ಗ್ರಂಥಗಳಿಗೆ ಸಂಬಂಧಿಸಿದಂತೆ ’ಪೋಸ್ಟರ್ ಮೇಕಿಂಗ್” ಮಾಡುವುದು. ಕವರ್ ಪೇಜ್, ಬುಕ್ ರಿವ್ಯೂವ್ ಮಾಡುವುದನ್ನು ಕಲಿತರು.

 

ಗ್ರಂಥಗಳನ್ನು ಓದಿದ ನಂತರ ಅದರ ಸಾರಾಂಶವನ್ನು ತಮ್ಮದೇ ವಾಕ್ಯಗಳಲ್ಲಿ  ಹೇಳುವ ಚಟುವಟಿಕೆ ನೀಡಲಾಗಿತ್ತು. ಇದರಿಂದ ಮಕ್ಕಳಲ್ಲಿ  ಪುಸ್ತಕಗಳನ್ನು ಓದುವ ಅಭಿರುಚಿ ಮೂಡಿತು.ಮಕ್ಕಳ ಜ್ನಾನ ಸಂಪತ್ತು ಹೆಚ್ಚಾಯಿತು.

೨).   ’ಮೈಥಾಲಿಜಿ ವೀಕ್’= ಈ ಚಟುವಟಿಕೆಯಲ್ಲಿ ಮಕ್ಕಳಿಗೆ ಪುರಾಣಗಳ ಪರಿಚಯ ಮಾಡಿಸುವ ಸಲುವಾಗಿ ಈ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಪೌರಣಿಕ ಛಾಯೆಯು ಒಳಗೊಂಡಿದೆ ಎಂಬ ಅಂಶವನ್ನು ಮಕ್ಕಳಿಂದ ನಾಟಕವನ್ನಾಡಿಸುವ ಮೂಲಕ ಪರಿಚಯಿಸಲಾಯಿತು.ಪೌರಾಣಿಕ ವಿಶೇಷ ದಿನಗಳಲ್ಲಿ ಮಕ್ಕಳು ಹಾಡು, ನೃತ್ಯ,ನಾಟಕ ಎಂಬಿತ್ಯಾದಿ ಕಾರ್ಯಕ್ರಮಗಳಲ್ಲಿ ಬಹಳ ಲವಲವಿಕೆಯಿಂದ ಪಾಲ್ಗೊಂಡು ಪೌರಾಣಿಕ ವಿಚಾರಗಳನ್ನು ತಿಳಿದುಕೊಂಡರು. ಈ ರೀತಿಯಾಗಿ ಶಾಲೆಗಳಲ್ಲಿ ಚಟುವಟಿಕೆಗಳನ್ನು ನಡೆಸಿದಾಗ ಮಕ್ಕಳಲ್ಲಿ ಕಲಾತ್ಮಕ ಅಭಿರುಚಿ ಬೆಳೆದು, ಅವರಲ್ಲಿ ಸರ್ವತೋಮುಖ ಬೆಳವಣಿಗೆ  ಸಾಧ್ಯವಾಗುತ್ತದೆ.

          ಈ ವರ್ಷ ಬಹಳ ವಿಶೇಷವಾಗಿ ಮೈಥಾಲಿಜಿ ವೀಕ್ ಅನ್ನು ಆಚರಿಸಲಾಯಿತು. ಈ ಸ್ಪೇಷಲ್ ವೀಕ್ ಆಚರಣೆಯ ಕಾರ್ಯನಿರ್ವಹಣೆಯಲ್ಲಿ ನಾನೂ ಒಬ್ಬಳಾಗಿದ್ದು ತುಂಬಾ ವಿಶೇಷವಾದದ್ದು .ಏಕೆಂದರೆ ಈ ಮೈಥಾಲಿಜಿ ವೀಕ್ ಅನ್ನು ಶಾಲಾ ವಾರ್ಷಿಕತೋತ್ಸವನ್ನಾಗಿ ಏರ್ಪಡಿಸಿ ಸಂಭ್ರಮಿಸಲಾಯಿತು.

 

                   ಈ ಕಾರ್ಯಕ್ರಮದಿಂದ ಹಲವಾರು ಅನುಭವಗಳನ್ನು ಪಡೆದುಕೊಳ್ಳಲಾಯಿತು. ಪ್ರಾಂಶುಪಾಲರ ಜೊತೆಗೂಡಿ ಸಹಶಿಕ್ಷಕರೆಲ್ಲರೂ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಲಾಯಿತು. ಅದರಂತೆ ಒಂದು ತಿಂಗಳ ಮುಂಚೆಯೇ ಕಾರ್ಯಕ್ರಮದ ಪೂರ್ವ ತಯಾರಿ ನಡೆಸಿಕೊಳ್ಳಲಾಯಿತು. ಸಾಂಸ್ಕೃತಿಕ ಚಟುವಟಿಕೆಗಳ ಪಟ್ಟಿ ತಯಾರಿಸಿ ಹಾಡು,ನೃತ್ಯ,ನಾಟಕ ಎಂಬ ವಿಭಾಗ ಮಾಡಿಕೊಳ್ಳಲಾಯಿತು. ಒಂದೊಂದು ವಿಭಾಗಕ್ಕೂ ತಲಾ ಇಬ್ಬರು ಅಥವಾ ಮೂವರು ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಯಿತು. ಅದರಂತೆ ನನಗೂ ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದಂತೆ ೪ ರಿಂದ ೭ ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಹಾಡನ್ನು ಕಲಿಸುವ ಹೊಣೆಗಾರಿಕೆಯನ್ನು ಸಹ ಶಿಕ್ಷಕ –ಶಿಕ್ಷಕಿಯರೊಂದಿಗೆ ನೀಡಲಾಯಿತು.  ನಾನು ಬಹಳ ಖುಷಿಯಿಂದ ಸಹಶಿಕ್ಷಕ- ಶಿಕ್ಷಕಿಯರೊಂದಿಗೆ ಬೆರೆತು ಮಕ್ಕಳಿಗೆ ಸುಮಧುರವಾಗಿ ಹಾಡುವುದನ್ನು ಕಲಿಸಲಾಯಿತು. ಜೊತೆಗೆ ಕಾರ್ಯಕ್ರಮ

ನಡೆಯುವ ಸಂದರ್ಭದಲ್ಲಿ ಯು.ಕೆ.ಜಿ. ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ  ನೀಡಲಾಯಿತು. ಇದರಿಂದ ಚಿಕ್ಕಮಕ್ಕಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಕಲಿತುಕೊಂಡೆನು.ಮಕ್ಕಳಿಗೆ ವೇಷಭೂಷಣ ತೊಡಿಸಿ ಅಲಂಕಾರ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಿದೆನು. ಈ ಕಾರ್ಯಕ್ರಮದಲ್ಲಿ ಎಲ್ಲರೊಂದಿಗೆ ನಾನು ಒಬ್ಬಳಾಗಿ ತೊಡಗಿಸಿಕೊಂಡಿದ್ದರಿಂದ ನನ್ನ ಎಲ್ಲ ಸಹಶಿಕ್ಷಕಿಯರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಯಿತು. ಕೊಟ್ಟ ಜವಾಬ್ದಾರಿಯನ್ನು ಎಲ್ಲರೊಂದಿಗೆ ಹಂಚಿಕೊಂಡು ಒಟ್ಟಾಗಿ ಕಾರ್ಯನಿರ್ವಹಿಸಿದ್ದರಿಂದ ಪ್ರೀತಿ, ವಿಶ್ವಾಸ,ಸ್ನೇಹ, ಒಡನಾಟ ಮೂಡಲು ಅನುವು ಮಾಡಿಕೊಟ್ಟಿತು.    

  • CELEBRATIONS

ಮಕ್ಕಳಿಗೆ ನಮ್ಮ ದೇಶ, ನಾಡು ನುಡಿಯ ಸಂಸ್ಕೃತಿಯ ಪರಿಚಯವಾಗುವುದು ಶಾಲಾ ದಿನಗಳಿಂದಲೇ.ಶಾಲೆಗಳಲ್ಲಿ  ನಾಡಹಬ್ಬಗಳು, ರಾಷ್ಟ್ರೀಯಹಬ್ಬಗಳು, ಇತರ ವಿಶೇಷ ಹಬ್ಬಗಳನ್ನು ಆಚರಿಸುವುದರಿಂದ ಮಕ್ಕಳಲ್ಲಿ ರಾಷ್ಟಪ್ರೇಮ, ದೇಶಭಕ್ತಿ, ನಾಡಿನ ಬಗ್ಗೆ ಗೌರವ ಮೂಡುವುದರ ಜೊತೆಗೆ ಹಬ್ಬಗಳ ವಿಶೇಷತೆಯ ಅರಿವಾಗುತ್ತದೆ.ಶಾಲೆಗಳಲ್ಲಿ ಈ ಹಬ್ಬಗಳನ್ನು ಆಚರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಕ್ಕಳು ಕ್ರಿಯಾಶೀಲರಾಗಿ  ಭಾಗವಹಿಸುವರು. ಮಕ್ಕಳು ನ್ಯತ್ಯ, ಹಾಡು, ನಾಟಕ, ಸಂಗೀತ, ಭಾಷಣ ಎಂಬಿತ್ಯಾದಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಅವರಲ್ಲಿನ ಪ್ರತಿಭೆಯನ್ನು ಹೊರಹಾಕುವರು.ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರಿಗೆ ಒಂದು ಉತ್ತಮ ವೇದಿಕೆ ಲಭಿಸಿ, ಆತ್ಮಸ್ಥೈರ್ಯ ಹೆಚ್ಚುವುದು. ಜೊತೆಗೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪೋಷಿಸಲು ಇಂತಹ ಆಚರಣೆಗಳಿಂದ ಸಾಧ್ಯ.

೧).ಶ್ರೀಕೃಷ್ಣ ಜನ್ಮಾಷ್ಠಮಿ = ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ನಮ್ಮ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲಿಗೆ ಯು.ಕೆ.ಜಿ. ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕೃಷ್ಣನ ಮಹಿಮೆಯನ್ನು ಸಾರುವ ನೃತ್ಯವನ್ನು ಮನಮೋಹಕವಾಗಿ ಪ್ರದರ್ಶಿಸಿದರು. ೧ ನೇ ತರಗತಿಯ ಮಕ್ಕಳು ಭೂಲೋಕದಲ್ಲಿ ಭಗವಂತನಾದ ಕೃಷ್ಣನನ್ನು ವಿವಿಧ ಹೆಸರುಗಳಿಂದ ಭಕ್ತಿಯಿಂದ ಆರಾಧಿಸುವರು  ಎಂಬುದನ್ನು’ ಅಚ್ಯುತಂ ಕೇಶವಂ, ಕೃಷ್ಣ ದಾಮೋದರಂ “ ಎಂಬ ಹಾಡಿನ ಮೂಲಕ  ಸುಮಧುರವಾಗಿ ಹಾಡಿದರು. ೪ ಮತ್ತು ೫ ನೇಯ ತರಗತಿಯ  ಮಕ್ಕಳು  ಕೃಷ್ಣನ ತುಂಟಾಟ ಹಾಗೂ ಕಾಳಿಂಗಮರ್ಧನವನ್ನು ನೃತ್ಯದ ಮೂಲಕ ಮನೋಹರವಾಗಿ ನರ್ತಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡಿದರು.ಇನ್ನೂ  ನರ್ಸರಿಯಲ್ಲಿ ಓದುತ್ತಿರುವ ಕಿನ್ನರ –ಕಿನ್ನರಿಯರು “ ರಾಧಾ- ಕೃಷ್ಣ” ರ ವೇಷಭೂಷಣದಿಂದ ಅಲಂಕೃತಗೊಂಡು

ತಮ್ಮ ಸೌಂದರ್ಯದಿಂದ ಎಲ್ಲರ ಕಣ್ಮನ ತಣಿಸಿದರು. ಅಂದು ನರ್ಸರಿ ಮಕ್ಕಳಿಂದ ಮಡಿಕೆಯಲ್ಲಿ ಮೊಸರನ್ನು ಕಡೆದು ಬೆಣ್ಣೆ ತೆಗೆಯುವ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳೆಲ್ಲರೂ ಖುಷಿಯಿಂದ ಭಾಗವಹಿಸಿ ಸಂಭ್ರಮಪಡುತ್ತಾ ಶ್ರೀಕೃಷ್ಣ ಜನ್ಮಾಷ್ಠಮಿಯ ಆಚರಣೆಗೆ ಮೆರಗು ತಂದುಕೊಟ್ಟರು.

೨).ಕನ್ನಡ ರಾಜ್ಯೋತ್ಸವ

 

ಕಳೆದ ವರ್ಷದಂತೆ ಈ ವರ್ಷವು ನಮ್ಮ ಶಾಲೆಯಲ್ಲಿ ನವೆಂಬರ್ ೨೬ ರಂದು ಬಹಳ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಅಂದು ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳೆಲ್ಲರೂ ಬಹಳ ಸಂಭ್ರಮದಿಂದ ಭಾಷಣ, ಹಾಡು,ನೃತ್ಯ,ನಾಟಕ,ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂತಸಪಟ್ಟರು. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ  ಹಾಗೂ ಶಿಕ್ಷಕ ವೃಂದದವರಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ ಮೂಡಿತು ಹಾಗೂ ವಿದ್ಯಾರ್ಥಿಗಳಿಗೆ ಕನ್ನಡ ನಾಡಿನ ವಿಶೇಷತೆಗಳ ಬಗ್ಗೆ ಗೊತ್ತಿಲ್ಲದ  ಎಷ್ಟೋ ವಿಷಯಗಳು ಮನವರಿಕೆಯಾಗಿ  ಕಾರ್ಯಕ್ರಮವು ರಂಜನೀಯವಾಗಿ ಎಲ್ಲರ ಮನಸ್ಸನ್ನು ಸೆಳೆಯಿತು.

೩).ಸಂಕ್ರಾಂತಿ ಹಬ್ಬ

 

ನಮ್ಮ ಶಾಲೆಯ ಮಕ್ಕಳು ಸಂಕ್ರಾಂತಿ ಹಬ್ಬದ ಆಚರಣೆಯ  ವಿಶೇಷತೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಿಳಿದುಕೊಂಡರು. ಪುರಾಣ ಕಾಲದಲ್ಲಿ ಬಸವಣ್ಣನು ಶಿವನ ಶಾಪಕ್ಕೆ ತುತ್ತಾಗಿ ಭೂಲೋಕದಲ್ಲಿ ನೆಲೆಸಿದ್ದರಿಂದ ಸಂಕ್ರಾಂತಿ ಹಬ್ಬದ ಆಚರಣೆ ಪ್ರಾರಂಭವಾಯಿತು ಎಂಬ ವಿಚಾರವನ್ನು ಮಕ್ಕಳು ಅರಿತರು. ಮೈಥಾಲಜಿ ವೀಕ್ ಮತ್ತು ಸಂಕ್ರಾಂತಿ ಹಬ್ಬ ಇವೆರಡನ್ನೂ ಜೊತೆಗೂಡಿಸಿ ಶಾಲಾ ವಾರ್ಷಿಕೋತ್ಸವವನ್ನು ಏರ್ಪಡಿಸಿ ಆಚರಿಸಲಾಯಿತು. ಅಂದು ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಸುಗ್ಗಿಯ ಕುರಿತು ಸಂಗೀತ, ಹಾಡು,ನೃತ್ಯ, ನಾಟಕಗಳನ್ನು ಪ್ರದರ್ಶಿಸಿದರು. ಸಂಕ್ರಾಂತಿ ಹಬ್ಬದ ಸೊಗಡಿಗೆ ಪೌರಾಣಿಕ ಕಥೆಯ ಕಂಪನ್ನು ಬೆರೆಸಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.

A parent’s point of view;- ಡೆಲ್ಲಿ ವರ್ಲ್ಡ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಇಬ್ಬರು ಮಕ್ಕಳು. ಮೊದಲನೇಯ ಮಗ ೬ನೇ ತರಗತಿಯಲ್ಲಿ ಓದುತ್ತಿದ್ದಾನೆ. ಎರಡನೇಯ ಮಗ ೪ನೇಯ ತರಗತಿಯಲ್ಲಿ ಓದುತ್ತಿದ್ದಾನೆ. ನಮ್ಮ ಶಾಲೆಯು “ ಶಾಲಾವಾರ್ಷಿಕೋತ್ಸವದ” ದಿನಾಚರಣೆಯನ್ನು ಪ್ರಕಟಿಸಿತು. ಇದರಿಂದ ನನಗೆ ಸಂಭ್ರಮವೋ ಸಂಭ್ರಮ. ಕಾರಣ ಎಲ್ಲಾ ಮಕ್ಕಳೊಂದಿಗೆ ನನ್ನ ಇಬ್ಬರು ಮಕ್ಕಳು ವೇದಿಕೆಯ ಮೇಲೆ ಯಾವ ರೀತಿ ಕಾಣಿಸುತ್ತಾರೋ, ಯಾವ ರೀತಿ ಹಾಡು,ನೃತ್ಯದಲ್ಲಿ ಭಾಗವಹಿಸಿ ಪ್ರದರ್ಶನ ನೀಡುತ್ತಾರೋ ಎಂಬ ಕುತೂಹಲ ಕಾತುರ. ಆ ದಿನ ಬಂದೇ ಬಿಟ್ಟಿತು. ಮಕ್ಕಳಿಬ್ಬರೂ ತನ್ನ ಸಂಗಡಿಗರೊಂದಿಗೆ  ಬಣ್ಣ ಬಣ್ಣದ ಉಡುಪನ್ನು ಧರಿಸಿ, ಸುಂದರವಾಗಿ ಅಲಂಕೃತಗೊಂಡು ತನ್ನ ಸಂಗಡಿಗರೊಂದಿಗೆ ಸುಗ್ಗಿ ಹಾಡನ್ನು ಹಾಡುತ್ತಾ, ವಿವಿಧ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ನೃತ್ಯದ ಮೂಲಕ ತನ್ನ ಸಂಗಡಿಗರೊಂದಿಗೆ  ಬಹಳ ಸೊಗಸಾಗಿ ವೇದಿಕೆಯ ಮೇಲೆ ಪ್ರದರ್ಶಿದರು.

 

ಅಂದು ಶಾಲೆಯ ಎಲ್ಲಾ ಮಕ್ಕಳು ವಿವಿಧ ವೇಷಭೂಷಣ ತೊಟ್ಟು, ವಿವಿಧ ನೃತ್ಯ, ವಿವಿಧ ಭಾಷೆಯಲ್ಲಿ ಸುಗ್ಗಿಯ ಆಚರಣೆಯ ಕುರಿತ ಹಾಡನ್ನು ಹಾಡುತ್ತಾ ನಾಟಕವನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟರು. ಸಂಕ್ರಾಂತಿ ಹಬ್ಬದಂದು ತಯಾರಿಸುವ ತಿಂಡಿ ತಿನಿಸುಗಳ ಬಗ್ಗೆ,ಎಳ್ಳು-ಬೆಲ್ಲ ಬೀರಿ ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಹಂಚಿಕೊಳ್ಳುವುದರ ಬಗ್ಗೆ, ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸುವ ರೀತಿ, ಅವರ ಉಡುಗೆ ತೊಡುಗೆಯ ಬಗ್ಗೆ ಮಕ್ಕಳಿಗೆ ಅರ್ಥವಾಯಿತು. ಮಕ್ಕಳಿಗೆ ತನ್ನ ಸಂಗಡಿಗರೊಂದಿಗೆ ವೇದಿಕೆಯನ್ನು ಹಂಚಿಕೊಂಡು ಪರಸ್ಪರ ಸಹಕರಿಸಿಕೊಂಡು ನೃತ್ಯ ಮಾಡಬೇಕೆಂಬುದನ್ನು ಕಲಿತರು. ವೇದಿಕೆಯ ಮೇಲೆ ಶಿಸ್ತನ್ನು ಪಾಲಿಸಬೇಕೆಂಬುದನ್ನು ಅರಿತರು. ಒಟ್ಟಾರೆಯಾಗಿ ಹೇಳುವುದಾದರೆ ಶಾಲೆಯ ಎಲ್ಲಾ ಮಕ್ಕಳು ಉಲ್ಲಾಸ, ಉತ್ಸಾಹ, ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಶಾಲಾ ವಾರ್ಷಿಕೋತ್ಸವವು ಬಹಳ ಸುಂದರವಾಗಿ ಮೂಡಿತು.